ಅಮ್ಮಾ ನಿನ್ನ ಮಡಿಲಲ್ಲಿ ನಾನು ಮತ್ತೊಮ್ಮೆ ಮಗುವಾಗುವ ಆಸೆ
ಏನನು ತಿಳಿಯದ ಮುಗ್ದನಗೆಯ ಬೀರುವ ಮುದ್ದು ಕಂದಮ್ಮನಾಗುವ ಆಸೆ||ಪ||
ಕಾಗೆಯ ಕರೆಯುತ,ಚಂದಿರನ ತೋರಿಸುತ ಗುಮ್ಮನು ಬರುವ ಎಂದು ಹೆದರಿಸುತ
ಮಮ್ಮನು ತಿನಿಸಿದ ದಿನಗಳು ಇನ್ನು ಮರೆತಿಲ್ಲ.
ಅಮ್ಮಾ ನಿನ್ನ ಮಡಿಲಲ್ಲಿ ನಾನು ಮತ್ತೊಮ್ಮೆ ಮಗುವಾಗುವ ಆಸೆ
ಏನನು ತಿಳಿಯದ ಮುಗ್ದನಗೆಯ ಬೀರುವ ಮುದ್ದು ಕಂದಮ್ಮನಾಗುವ ಆಸೆ||ಪ||
ಬರೆಯ ಬೇಕೆಂದಿರುವೆ ಆ ದೇವರಿಗೆ ಕಾಗದವೊಂದನು
ಮರಳಿ ಕೊಡುವುದಾದರೆ ಆ ಬಾಲ್ಯವನ್ನು ಹೊತ್ತೊಯಿ ಈ ಎಲ್ಲಾ ಸುಕವನು
ಇನ್ನೆನನೂ ಬೇಡೆನು ಹೊರತಾಗಿ ಅಮ್ಮನ ನಗೆಯನು.
ಅಮ್ಮಾ ನಿನ್ನ ಮಡಿಲಲ್ಲಿ ನಾನು ಮತ್ತೊಮ್ಮೆ ಮಗುವಾಗುವ ಆಸೆ
ಏನನು ತಿಳಿಯದ ಮುಗ್ದನಗೆಯ ಬೀರುವ ಮುದ್ದು ಕಂದಮ್ಮನಾಗುವ ಆಸೆ||ಪ||
ಪಕ್ಕದ ಮನೆಯ ಪುಟ್ಟನು ಕುಯಿ ಕುಯಿ ಎನ್ನುವ ಚಪ್ಪಲಿ ಹಾಕಿ ಸದ್ದನು ಮಾಡುತ
ಬಂದಾಗಲೆಲ್ಲ ಕಾಡುವದೊಂದೇ ಪ್ರಶ್ನೆ ಹೆಜ್ಜೆಯ ಮೇಲೊಂದು ಹೆಜ್ಜೆಯನಾಕುತ
ವಾಲುತ,ತೂಗುತ ಕಲಿತ ಮೊದಲ ಹೆಜ್ಜೆಯ ನನಗೇಕೆ ನೆನಪಿಲ್ಲ.