ಹಾರುತಿಹುದು,ಏರುತಿಹುದು ನೋಡು ನಮ್ಮ ಬವುಟ
ಹೆಮ್ಮೆಯಿಂದ ಹೇಳುವೆ ನಾನು ನನ್ನ ದೇಶ ಭಾರತ
ಕಾಶ್ಮೀರದಿಂದ ಕನ್ನ್ಯಾಕುಮರಿವರೆಗೂ ಹರಡಿರುವ ಸುಂದರ ನಾಡು ನನ್ನ ಭಾರತ
ಶತ ಶತಮಾನದಿಂದ ಸಾಕಿ ಸಲಹುತಿಹ ತಯಿಯವಳು,ಪ್ರೀತಿಯಿಂದ ಕರೆವೇ ನಾ ಭಾರತಾಂಬೆ ಎನ್ನುತ
ಅವಳ ಮಡಿಲಿನಲ್ಲಿ ನೂರಾರು ಭಾಷೆಯುಂಟು ,ಸಾವಿರಾರು ಜಾತಿಗಳುಂಟು
ಅದರೇನು ಯಾರು ಇಲ್ಲಿ ಮೇಲೂ ಅಲ್ಲ ,ಯಾರು ಇಲ್ಲಿ ಕೀಳು ಅಲ್ಲ ಒಂದಾಗಿ ಬಾಳುತಿಹೆವು ಒಂದೇಮಾತರಂ ಎನ್ನುತ
ದೇಶಕಾಗಿ ಪ್ರಾಣ ಕೊಟ್ಟ ವೀರ ಯೋಧರು ಹುಟ್ಟಿಬಂದ ನಾಡಿನಲ್ಲಿ ಬಾಳುತಿರುವ ಹೆಮ್ಮೆನನಗಿದೆ
ಪಾಪ ಕಳೆಯಲು ಗಂಗೆಯುಂಟು, ಧ್ಯಾನಕಾಗಿ ಯೋಗಿಗಳಿಹರು,ಕೋಗಿಲೆ ಕಂಟದ ಗಾಯಕರಿಹರು,ನನಗೇನು ಕಮ್ಮಿ, ಹೆಮ್ಮೆಯಿಂದ ಬೀಗುತಿರವೆ,ನನ್ನ ದೇಶ ಭಾರತ,ನನ್ನ ದೇಶ ಭಾರತ...